ನನಗೆ ತುಂಬಾ ಇಷ್ಟವಾಗಿದ್ದ ಹಾಡಿದು. ಇದರ ಸಾಹಿತ್ಯ ಅಂತರ್ಜಾಲದಲ್ಲಿ ಬೇರೆಲ್ಲೂ ಸಿಗಲಿಲ್ಲ, ಆದ್ದರಿಂದ ಇಲ್ಲೇ ಬರೆದುಕೊಂಡೆ!
ಚಿತ್ರ : ಅವತಾರ ಪುರುಷ
ಸಾಹಿತ್ಯ : ಶ್ಯಾಮಸುಂದರ ಕುಲಕರ್ಣಿ
ಸಂಗೀತ : ವಿಜಯ ಆನಂದ
ಗಾಯಕರು : ಎಸ್. ಪಿ ಬಾಲಸುಬ್ರಹ್ಮಣ್ಯಂ, ವಾಣಿ ಜಯರಾಂ
ಸಾಗರಕೆ ಚಂದ್ರಮನ ಬೆರೆವಾಸೆ
ಚುಂಬನದ ಸಿಹಿಯಾಸೆ ||
ಮೇಘಕೆ ಬೀಸೋ ಗಾಳಿಯ ಆಸೆ
ಭೂಮಿಗೆ ಬೀಳೋ ಮಳೆಹನಿಯಾಸೆ
ಜೀವಕೆ ಸ್ನೇಹದ ಆಸೆ
ಜೀವಕೆ ಸ್ನೇಹದ ಆಸೆ ||
ಒಲವಿನ ತೇರು ಏರುವ ಆಸೆ
ಬಳಿಗೆ ಬರಲಾರೆಯೇನು
ಬೆಡಗಿನದೇ ನೀ ಲಾವಣ್ಯ ಸಿರಿಯೇ
ಬಿಟ್ಟು ಇರಲಾರೆ ನಾನು
ಜೀವನ ಪಥದಿ ಜೊತೆಯಾದೆ ನೀನು
ಕತ್ತಲ ಬಾಳ ಬೆಳಕಾದ ಭಾನು
ಮಾತಿದು ಸುರ ವೀಣೆಯಂತೆ
ಪ್ರೀತಿಯು ಸ್ವರ ಮೇಳದಂತೆ || ಸಾಗರಕೆ ||
ಕಾಮನಬಿಲ್ಲ ಕಣ್ಣಲ್ಲಿ ಕಂಡೆ
ಕಲೆಯ ಸಾಕಾರ ನೀನು
ನೂತನ ಗಾನ ಬಾಳಲ್ಲಿ ಬರೆದ
ಸುಖದ ಸವಿಭಾವ ನೀನು
ಚಿಮ್ಮುವ ನಲ್ಮೆ ಹೊನಲಾಗಿ ಬಂದೆ
ಸ್ವರ್ಗದ ಸೊಬಗ ಧರೆಯಲ್ಲೇ ಕಂಡೆ
ಪ್ರೇಮವು ನಿಜಗಂಗೆಯಂತೆ
ಜೀವನ ಶ್ರುತಿಸೇರಿದಂತೆ || ಸಾಗರಕೆ ||
No comments:
Post a Comment